Breaking

Monday, September 21, 2020

SBI SO Recruitment 2020: ಹಿರಿಯ ಸಲಹೆಗಾರ, ಎಜಿಎಂ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

  SBI SO Recruitment 2020: ಹಿರಿಯ ಸಲಹೆಗಾರ, ಎಜಿಎಂ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ


 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತೀಯ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಬಿಐ ಸೀನಿರ್ ಕನ್ಸಲ್ಟೆಂಟ್ ಅನಾಲಿಸ್ಟ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಎಜಿಎಂ), ಡಾಟಾ ಟ್ರೈನರ್ ಮತ್ತು ಡಾಟಾ ಟ್ರಾನ್ಸ್ಲೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.

 
ಮುಂಬೈ ನಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಕ್ಟೋಬರ್ 8,2020ರೊಳಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.
 
 ವಿದ್ಯಾರ್ಹತೆ:

ಎಸ್‌ಬಿಐ ಎಸ್‌ಓ ನೇಮಕಾತಿಯ ವಿವಿಧ ಹುದ್ದೆಗಳಿಗೆ ಬಿ.ಇ/ಬಿ.ಟೆಕ್ ಇನ್ ಸಿಎಸ್/ಐಟಿ ಅಥವಾ ಎಂಸಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಎಸ್‌ಬಿಐ ಎಸ್‌ಓ ನೇಮಕಾತಿಯ ವಿವಿಧ ಹುದ್ದೆಗಳಿಗೆ ಜನವರಿ 31,2020ರ ಅನ್ವಯ ಕನಿಷ್ಟ 38 ರಿಂದ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‌ಬಿಐ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ವೇತನದ ವಿವರ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 42,000/- ರಿಂದ 66,070/-ರೂ ವೇತನವನ್ನು ನಿಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಎಸ್‌ಬಿಐ ಎಸ್‌ಓ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿದಾರರ ಕಿರುಪಟ್ಟಿಯನ್ನು ಮಾಡಲಾಗುವುದು. ನಂತರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ/ಓಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 750/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪ.ಜಾ/ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವುದು:

ಅಧಿಕೃತ ವಿಳಾಸ : ಇಲ್ಲಿ ಕ್ಲಿಕ್ ಮಾಡಿ 

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ 


No comments:

Post a Comment