Ayush Shivamogga Recruitment 2020: ಯೋಗ ತರಬೇತುದಾರರ ನೇಮಕಾತಿಗೆ ನೇರ ಸಂದರ್ಶನ
ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ ಶಿವಮೊಗ್ಗದಲ್ಲಿ 3 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿಗೆ 2 ಹುದ್ದೆಯಂತೆ ಒಟ್ಟು 6 ಯೋಗ ತರಬೇತಿದಾರರ ನೇಮಕಾತಿಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸಂದರ್ಶನಕ್ಕೆ ಹಾಜರಾಗಬಹುದು.
ವಿದ್ಯಾರ್ಹತೆ:
ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು 10+2 ಪಾಸಾಗಿರಬೇಕು ಮತ್ತು ಯೋಗ ತರಬೇತಿದಾರರು ಯೋಗ ಸರ್ಟಿಫಿಕೇಶನ್ ಬೋರ್ಡ್ ನಿಂದ ಯೋಗ ವೆಲ್ ನೆಸ್ ಇನ್‌ಸ್ಟ್ರಕ್ಟರ್ ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು ಅಥವಾ 10+2 ಪಾಸಾಗಿರಬೇಕು ಜೊತೆಗೆ ಹೆಸರಾಂತರ ಸಂಸ್ಥೆಯಿಂದ ಯೋಗ ತರಬೇತಿಯ ಅನುಭವ ಹೊಂದಿರಬೇಕು.
ವಯೋಮಿತಿ:
ಕನಿಷ್ಟ 21 ರಿಂದ ಗರಿಷ್ಟ 60 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ವೇತನದ ವಿವರ:
ಯೋಗ ತರಬೇತುದಾರ ಹುದ್ದೆಗಳಿಗೆ ನೇಮಕ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ 8,000/-ರೂ (ಗಂಟೆಗೆ 250/-ರೂ ಅಂದರೆ 32 ಗಂಟೆಗೆ / ತಿಂಗಳಿಗೆ ಪಾವತಿಸಲಾಗುವುದು) ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಯೋಗ ತರಬೇತಿದಾರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.
ಸಂದರ್ಶನದ ವಿವರ:
ಆಸಕ್ತಿಯುಳ್ಳ ಅಭ್ಯರ್ಥಿಗಳು ಸೆಪ್ಟೆಂಬರ್ 29,2020ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಜಿಲ್ಲಾ ಆಯುಷ್ ಕಛೇರಿಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ, ದ್ವಿತೀಯ ಪಿ.ಯು.ಸಿ ಅಂಕಪಟ್ಟಿ ಯೋಗ ತರಬೇತಿ ಪ್ರಮಾಣ ಪತ್ರಗಳ 1 ಸೆಟ್ ಜೆರಾಕ್ಸ್ ಪ್ರತಿಗಳನ್ನು 2 ಭಾವಚಿತ್ರದೊಂದಿಗೆ ಸಲ್ಲಿಸುವುದು ಮತ್ತು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಧ್ಯಾಹ್ನ 2:30 ರಿಂದ 5:30 ಗಂಟೆಯೊಳಗೆ ಸಂದರ್ಶನಕ್ಕೆ ಮೂಲ ದಾಖಲೆಗಳೊಂದಿಗೆ ಹಾಜರಾಗುವುದು.
I'll sarch job
ReplyDelete